ಪಂಚವಾದ್ಯ
ಕಲ್ಲಾಪು ಶ್ರೀ ಮಹಾಲಕ್ಷ್ಮೀ ಮತ್ತು ಮಹಾಗಣಪತಿ ದೇವಸ್ಥಾನ ಪುರಾತನ ಅಂದರೆ ಚಾಲುಕ್ಯರ ಕಾಲದ್ದು. ಕಾರಣಾಂತರಗಳಿಂದ ಅದು ಶೃಂಗೇರಿಯಿಂದ ಸ್ಥಳಾಂತರಿಸಲ್ಪಟ್ಟ ದೇವಸ್ಥಾನ. ಸುಮಾರು 40 ವರ್ಷಗಳ ಹಿಂದೆ ಸ್ಥಳಾಂತರಗೊಂಡಿರುವ ಈ ದೇವಾಲಯದಲ್ಲಿ ಆಕರ್ಷಕ ಹಾಗೂ ಗಜಲಕ್ಷ್ಮಿಯ ವಿಗ್ರಹ ಇದೆ. ಭಕ್ತರ ಮನಸ್ಸಿನಲ್ಲಿನ ಇಚ್ಚೆಯನ್ನು ಅತೀ ಶೀಘ್ರದಲ್ಲಿ ನೆರವೇರಿಸುವ ಅದ್ಭುತ ಶಕ್ತಿ ಕೇಂದ್ರ ಇದಾಗಿದೆ. ನಂಬಿಕೆ ಅಚಲವಾಗಿರ ಬೇಕು ಮತ್ತು ಶೃದ್ಧೆಯೂ ಅಗತ್ಯ. ಕಳೆದ 35 ವರ್ಷಗಳಲ್ಲಿ ಹಲವಾರು ಏಳು ಬೀಳು ಕಂಡ ದೇವಸ್ಥಾನ ಇದೀಗ ಹಂತ ಹಂತವಾಗಿಯೇ ಸಣ್ಣ ಸಣ್ಣ ಅಭಿವೃದ್ಧಿಯ ಮೂಲಕ ಭಕ್ತರಿಗೆ ಮುದವನ್ಶೂ ನೀಡುತ್ತಿದೆ. ಇತ್ತೀಚೆಗೆ ಭಕ್ತರು ಸೇರಿ ದೇವಸ್ಥಾನದಲ್ಲಿನ ಪೂಜಾ ಸಮಯದಲ್ಲಿ ಪಂಚವಾದ್ಯ ಇರಬೇಕು ಎಂಬ ಕಲ್ಪನೆಯನ್ನು ಸಾಕಾರ ಗೊಳಿಸುವ ದೃಷ್ಟಿಯಲ್ಲಿ ಒಂದು ವಿದ್ಯುತ್ ಚಾಲಿತ ಪಂಚ ವಾದ್ಯ ಒದಗಿಸಿರುವುದು ಸಂತೋಷದ ವಿಷಯ ವಾಗಿದೆ. ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಭಕ್ತರಿಗೂ ಸಕಲ ಜೀವರಾಶಿಗಳ ಜನ್ಮದಾತೆ ಹಾಗೂ ಸಂಕಲ ಸಂಪತ್ತಿನ ಒಡತಿಯಾದ ಆ ಮಹಾತಾಯಿ ಶ್ರೀ ಮಹಾಲಕ್ಷ್ಮೀ ಮತ್ತು ಮಹಾಗಣಪತಿ ದೇವರು ಸಂಪೂರ್ಣ ಅನುಗ್ರಹ ಮತ್ತು ರಕ್ಷಣೆ ಸದಾ ಇರಲಿ… ಅರ್ಚಕ ಮತ್ತು ಭಕ್ತರ ಪ್ರಾರ್ಥನೆ.